ಓ ಮನಸೇ...... <3
ಹೇಳಿಕೊಳ್ಳಲಾಗದ ನೂರು ಭಾವವಿದೆ ಮನದಲಿ...
ಹೇಳಿಕೊಳ್ಳಲು ಮನಸೆಂಬ ಮನಸಿಗೆ ಮನಸಿಲ್ಲ.....
ಅದನ್ನು ಅಕ್ಷರ ರೂಪದಲ್ಲಿ ಬರೆದು ತೋರಿಸಲೂ ಮನಸು ಒಪ್ಪುತ್ತಿಲ್ಲ.....
ಎಲ್ಲರ ಮುಂದೆ ಸಣ್ಣವನಾಗಿ ಕಾಣಲು ಯಾವ ಮನವು ಒಪ್ಪದು...
ಎಂಬ ಸತ್ಯವನ್ನು ಅರಿವು ಮಾಡಿದ್ದು ನೀನೇ ಅಲ್ಲವೇ ಮನಸೇ..... <3
ಯಾರ ಮುಂದೆಯೂ ಮಂಡಿಯೂರಿ ನಿನ್ನತನವ ಬಿಟ್ಟು ತಲೆ ಬಾಗಬೇಡ ನೀನು ನೀನಾಗೇ ಇರು ಎಂದು ಹೇಳುವ ಓ ಮನಸೇ......
. <3
ನಿನ್ನ ಕನಸುಗಳೆಲ್ಲವೂ ನನಸಾಗದಿರಬಹುದು ಆದರೆ ಅನ್ಯರ ಮನದೊಳಗಿರುವ ನಿನ್ನ ಮೇಲಿನ ಕನಸನ್ನು ನುಚ್ಚು ನೂರು ಮಾಡಬೇಡ ಎಂದು ಸಾರಿದ ಓ ಮನಸೇ.......
. <3
ಜಗದ ಜಂಜಡವೆಲ್ಲವ ಮರೆತು ಮೌನದೊಳು ಧ್ಯಾನಿಯಾಗಿ ಜ್ಞಾನದ ಪಥದತ್ತ ನಡೆ ಮನಸೇ..... <3
.
ಕೊನೆಗೆ ಓ ಮನಸೇ ನೀ ತುಸು ಮೌನವಾಗಿರು.... <3