ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

Thursday, 2 January 2014

ಅವ್ವಾ ನಿಮಗೆ ಸಾಟಿ ಯಾರಿಲ್ಲವ್ವ ........



ಕೆಲಸಗಳ ಒತ್ತಡದಲ್ಲಿ ಮುಳುಗಿ ಸುಸ್ತಾಗಿ ಮನೆಗೆ ಬಂದ ಮೇಲೆ….
ಅಮ್ಮಾ ಯಾಕೋ ಸಕ್ಕತ್ ಮೈ ಭಾರ ಆಗ್ತಿದೆ ಕೈ ಕಾಲು ಅಲುಗಾಡಿಸಲೂ ಆಗುತ್ತಿಲ್ಲ"  ಅಂದದ್ದೇ ತಡ
ಯಾರ ಕಣ್ಣು ಬಿತ್ತೊ ಏನ್ ಕತೇನೋ ತಡಿ ದೃಷ್ಟಿ ತೆಗೀತೀನಿ ಅಂದ್ರು ಅಮ್ಮ.........

ಅಯ್ಯೋ
 ಅಮ್ಮ  ಮುಖಕ್ಕೆ ದೃಷ್ಟಿ ಬೇರೆ ಕೇಡು ನೀವೊಳ್ಳೆ ಏನೇನೋ ಹೇಳ್ತೀರ ಅಂದೆ.....

ಅಯ್ಯೋ
 ಯಾರ್ ಕಣ್ಣಿಗೆ ನೀ ಹೆಂಗೆ ಕಂಡರೂ ನನ್ನ ಕಣ್ಣಿಗೆ ನೀನಿನ್ನು ಮುದ್ದು ಮಗನೆ ಕಣೋ....... 
ಎನ್ನುತ್ತಲೆ ಅಡುಗೆ ಮನೆಯಿಂದ ಸಾಸಿವೆ ಕಾಳನ್ನು ತಂದು ಬಲದಿಂದ ಎಡಕ್ಕೆ ಮೂರು ಸರಿ,
ಎಡದಿಂದ ಬಲಕ್ಕೆ ಮೂರು ಸಾರಿ ತಿರುಗಿಸಿ  ಕಣ್ಣು  ಕಣ್ಣು ಅದೂ ಇದು ಏನೇನೋ 
ಹೇಳುತ್ತಾ ಸಾಸಿವೆಯನ್ನು ಒಲೆಗೆ ಹಾಕಿದರು.....

ಒಲೆಯಲ್ಲಿದ್ದ ಕಾದ ಕೆಂಡದ ಮೇಲೆ ಬಿದ್ದ ಸಾಸಿವೆ ಚಿಟ ಪಟ ಅಂತ ಸ್ವಲ್ಪ ಜಾಸ್ತಿನೆ ಸದ್ದು ಮಾಡ್ತು 
ಅಯ್ಯೋ ನೋಡು ಎಷ್ಟು ದೃಷ್ಟಿ ಆಗಿದೆ ಅಂದ್ರು ಅಮ್ಮ ನಂತರ ಬಂದವರೇ ನನ್ನ ಮುಖ ನಿವಾಳಿಸಿ 
ನಟಿಕೆ ತೆಗೆದರು ಹತ್ತೂ ಬೆರಳಿಂದ ಪಟ ಪಟಾಂತ ನಟಿಕೆ ಬಂದಿತು.....

ಆಮೇಲೆ ಕುಡಿಯೋಕೆ ಟೀ ಮಾಡಿಕೊಟ್ಟುಮೊದಲು ಟೀ ಕುಡಿಆಮೇಲೆ ಕಡಾಯಿಯಲ್ಲಿ ಬಿಸಿ ನೀರು 
ಕಾದಿದೆ ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿದರೆ ಮೈ ಕೈ ನೋವು ಕಡಿಮೆ ಆಗುತ್ತೆ ಹೋಗಿ ಸ್ನಾನ ಮಾಡಿ
ಸ್ವಲ್ಪ ಹೊತ್ತು ಆರಾಮಾಗಿ ನಿದಿರೆ ಮಾಡು... ಮತ್ತೆ ಲಾಪ್ಟಾಪ್ ಹತ್ತಿರ ಕೂತ್ಕೋಬೇಡ ಆಯ್ತಾ?

ಮಧ್ಯಾನ ಊಟ ಮಾಡಿದ್ಯಾ ಇಲ್ವಾ.. ಕೆಲಸ ಕೆಲಸ ಅಂತಾ ಸದಾ ಕೆಲಸದಲ್ಲೇ ಮುಳುಗಿರ್ತಿಯಾ 
ಹೀಗಾದ್ರೆ ನೀನ್ ಆರೋಗ್ಯದ ಗತಿ ಏನುಕೆಲಸಜಾಸ್ತಿ ಅನಿಸಿದ್ರೆ  ಕೆಲಸ ಬಿಟ್ಟು ಬೇರೆ ಕೆಲಸ ನೋಡ್ಕೋ.....
ಆಗೊಲ್ಲ ಅಂದ್ರೆ ಕೆಲಸಕ್ಕೆ ಹೋಗದೆ ಇದ್ರೂ ಪರವಾಗಿಲ್ಲ ಸ್ವಲ್ಪ ದಿನ ಆರಾಮಾಗಿರು......

ಅಬ್ಬಾ
 ಅಮ್ಮಾ ಮೈ ಕೈ ಭಾರ ಅಂತ ಹೇಳಿದ ಒಂದೇ ಒಂದು ಮಾತಿಗೆ ಅಮ್ಮಾ ಎಷ್ಟು ಒದ್ದಾಡ್ತಿದ್ದಾರೆ 
ಅಯ್ಯೋ
 ದೇವ್ರೆ....

ಅಮ್ಮಾ
 ಹಾಗೇನೂ ಇಲ್ಲ ಇವತ್ತು ಮಾತ್ರ ಕೆಲಸ ಜಾಸ್ತಿ ಇತ್ತು ಅಂತಾ ಹೇಳಿ ಟೀ ಕುಡಿದು ಮುಗಿಸಿ ಸ್ನಾನಕ್ಕೆ ಹೊರಟೆ..

ಅಮ್ಮ
 ಹೇಳಿದಂತೆ ಬಿಸಿ ಬಿಸಿ ನೀರು ಮೈ ಮೇಲೆ ಬೀಳುತ್ತಾ ಇದ್ದಂತೆ ಮೈ ಹಗುರ ಅನಿಸೋ ಹಾಗೆ ಆಯ್ತು ವಾವ್...
ಸ್ನಾನ ಮುಗಿಸಿ ಬರೋ ಹೊತ್ತಿಗೆ ಬಿಸಿ ಬಿಸಿ ರಾಗಿ ಮುದ್ದೆ ಉಪ್ಸಾರು... ಒಣ ಮೆಣಸಿನ ಖಾರ ತಯಾರಾಗಿ 
ಕಾಯುತ್ತಾಇತ್ತು....

ಅಮ್ಮನ ಪ್ರೀತಿಯ ಕೈರುಚಿಯ ಚನ್ನಾಗಿ ತಿಂದು ತೇಗಿ ಊಟ ಮುಗಿಸಿ ಹಾಗೆಯೇ ಹಾಸಿಗೆಯ ಮೇಲೆ ಅಡ್ಡಾದೆ 
ಮುಂದಿನ ಐದೇ ನಿಮಿಷದಲ್ಲಿ ಸೊಗಸಾದ ನಿದಿರೆ ಬಂತು..........
ಅಮ್ಮನ (ಹಾ)ರೈಕೆಯ ಸಾಸಿವೆಯ ನಿವಾಳಿಕೆಯ ಮತ್ತು ಬಿಸಿ ನೀರಿನ ಜಳಕ ಬಿಸಿ ಬಿಸಿ ರಾಗಿ ಮುದ್ದೆ ಊಟ
 ಎಲ್ಲದರ ಪ್ರಭಾವದಿಂದಾಗಿ  ಆಯಾಸ ಕಡಿಮೆಯಾಗಿ ಉಲ್ಲಾಸ ಮೂಡಿದಂತೆ ಆಯ್ತು!…………
…………………………………<3 <3 <3 <3 <3 <3 <3 <3 <3 <3 ....................................

ಹೌದು ಅಮ್ಮಾ ಅನ್ನೋ ಮಮತಾಮಯಿಯ ಹೃದಯವೇ ಹಾಗೆ ತನ್ನ ಮಕ್ಕಳು ಬೆಳೆದು ಎಷ್ಟೇ ದೊಡ್ಡವರಾದರೂ 
ಅವರ ಕಣ್ಣಿಗೆಇನ್ನೂ ಚಿಕ್ಕವರಂತೆಯೇ ಕಾಣುತ್ತಾರೆ..... ಮಕ್ಕಳಿಗೆ ಸ್ವಲ್ಪ ನೋವಾದರೂ ಸಹಿಸದಂತಹ ಜಗದ 
ಏಕೈಕ ಜೀವ ಅಂದರೆ ಅದು ಅಮ್ಮ ಅನ್ನೋ ಕರುಣಾಮಯಿ ಮಾತ್ರ ............

.............ಅಮ್ಮ ( ಅವ್ವಾನಿಮ್ಮ ಮಮಕಾರಕ್ಕೆ ಕೋಟಿ ನಮನಗಳು.  <3  <3  <3  <3  <3  <3  <3

6 comments:

  1. Replies
    1. ತುಂಬು ಮನದ ಧನ್ಯವಾದಗಳು ಗುರು ಜೀ.... ನಿಮ್ಮ ಪ್ರೋತ್ಸಾಹಕ್ಕೆ ನಾ ಚಿರಋಣಿ.....

      Delete
  2. ನನ್ನ ಅಮ್ಮನಿಗೆ ಈಗ ಸರಿ ಸುಮಾರು 88 ವರ್ಷ ನನಗೋ ಆಕೆಯ ವಯಸ್ಸಿನ ಅರ್ಧ. ಆದರೂ ಈಗಲೂ ಆಕೆಯ ಕಣ್ಣಿಗೆ ನಾನು ಅದೇ ಪುಟ್ಟ ಕಂದ. ಎಲ್ಲ ಅಮ್ಮಂದಿರ ಮಮತಾಮಯೀ ಹೃದಯವನ್ನು ನಿಮ್ಮ ತಾಯಿಯವರ ನೆಪದಲ್ಲಿ ಸಾರಿ ಹೇಳಿದ್ದೀರಾ.
    ಒಳ್ಳೆಯ ಬರಹ.

    ReplyDelete
    Replies
    1. ತುಂಬು ಮನದ ಧನ್ಯವಾದಗಳು ಬದರಿ ಸರ್ .... ನಿಮ್ಮ ಪ್ರೋತ್ಸಾಹಕ್ಕೆ ನಾ ಚಿರಋಣಿ.....

      Delete
  3. ಅಮ್ಮನಿಗೆ ಅಮ್ಮನೇ ಸಾಟಿ.... ನೋ compromise ಸತೀಶ್....
    ಚೆನ್ನಾಗಿ ಬರೆದಿದ್ದೀರಿ.... ಇನ್ನಷ್ಟು ಬರವಣಿಗೆಗಳು ನಿಮ್ಮ ಬ್ಲಾಗ್ನಲ್ಲಿ ಮೂಡಿಬರಲಿ....

    ReplyDelete
    Replies
    1. ತುಂಬು ಮನದ ಧನ್ಯವಾದಗಳು ರೂಪಕ್ಕ .... ನಿಮ್ಮ ಪ್ರೋತ್ಸಾಹಕ್ಕೆ ನಾ ಚಿರಋಣಿ.....

      Delete