ಉತ್ತರ ಇಲ್ಲದ
ಹತ್ತಾರು ಪ್ರಶ್ನೆಗಳಲ್ಲಿ ತುಂಬಾ ಜನರನ್ನು
ಕಾಡುವ ಕೆಲವು
ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ದಿಕ್ಕಿನಲ್ಲಿ ಅಂತರಂಗದ ಒಂದು ಭಾವ ಇಲ್ಲಿದೆ …………….
ಪ್ರಶ್ನೆ ಒಂದು :- “ ಬೀಜ ಮೊದಲಾ ವೃಕ್ಷ ಮೊದಲಾ ” ?
ಯಾವುದಾದರೂ ಒಂದು ವಿಚಾರ ಚರ್ಚೆ ಮಾಡುವಾಗ ಪರ ವಿರೋಧಿಗಳಿಬ್ಬರನ್ನು ತತ್ತರಿಸುವಂತೆ ಮಾಡುವ ಪ್ರಶ್ನೆ ಇದು ……..
ಯಾವುದಾದರೂ ಒಂದು ವಿಚಾರ ಚರ್ಚೆ ಮಾಡುವಾಗ ಪರ ವಿರೋಧಿಗಳಿಬ್ಬರನ್ನು ತತ್ತರಿಸುವಂತೆ ಮಾಡುವ ಪ್ರಶ್ನೆ ಇದು ……..
ಇದರ ಬಗ್ಗೆ
ಆಲೋಚಿಸುತ್ತಾ ಹೋದಂತೆ ಮೊದಮೊದಲು ತಲೆ ಗೊಂದಲದ
ಗೂಡಾಗಿತ್ತು…….. ಹೀಗೆ ಒಮ್ಮೆ ಆಲೋಚನೆಯಲ್ಲಿ ಮುಳುಗಿದ್ದಾಗ ಈ ಪ್ರಶ್ನೆಗೊಂದು ಉತ್ತರ ದೊರೆಯಿತು ….
ಬೀಜ ಮೊದಲ ವೃಕ್ಷ
ಮೊದಲಾ ಎಂದು ಕೇಳಿದರೆ ನನ್ನ ಪ್ರಕಾರ ಮೊಳಕೆಯೇ ಮೊದಲು ಎಂದು ಹೇಳುವ ಮತ್ತು ಅದನ್ನು
ಸಮರ್ಥಿಸಿಕೊಳ್ಳುವ ಅಂಶಗಳು ಗೋಚರವಾಗುತ್ತಾ ಹೋದವು …….
ವೃಕ್ಷ ಬೆಳೆಯಲು
ಮೊದಲು ಬೀಜ ಬೇಕೇಬೇಕು....... ಮೊದಲ ಬೀಜದ
ಉಗಮ ಮಣ್ಣ ಕಣ ಕಣಗಳಿಂದ.... ಜೀವ ಕಣಗಳ ಸಂಗಮದಿಂದ ಬೀಜ ರೂಪ ಪಡೆಯಿತು…… ಅದಕ್ಕೆ ಮಳೆ ಹನಿಯ ಸಿಂಚನದಿಂದ ಮೊಳಕೆ
ಒಡೆದು ಚಿಗುರು
ಬೆಳೆದು ಗಿಡವಾಗಿ ಮರವಾಗಿ ಹೆಮ್ಮರವಾಗಿ ಬೆಳೆದು ……. ಅದರೊಳಗೂ ಚಿಗುರು ಒಡೆದು ಮೊಗ್ಗಾಗಿ ಬೆಳೆದು ಹೂವಾಗಿ ಅರಳಿ,
ಕಾಯಾಗಿ ಹಣ್ಣಾಗಿ
ರೂಪ ತಳೆದು…… ಕೊನೆಗೆ ಮಣ್ಣಲ್ಲಿ ಮಣ್ಣಾಗಿ ಮತ್ತಷ್ಟು ಬೀಜಗಳ
ಉಗಮಕ್ಕೆ ಕಾರಣವಾಯಿತು …… ಬೀಜವೇ ಮೊದಲು ….. ಇದು ನನ್ನ ಪರಿಕಲ್ಪನೆ ನನ್ನ ಪರಿಭಾವನೆ…………..
ಮಣ್ಣ ಕಣ ಕಣಗಳ
ಒಳಗಿನ ಜೀವ ಕಣದ
ಒಳಗೆ ಮೊಳಕೆ ಚಿಗುರಲು
ಒಳಗಿನ ಜೀವ ಕಣದ
ಒಳಗೆ ಮೊಳಕೆ ಚಿಗುರಲು
ಮಳೆ ಹನಿಯ ಚುಂಬನ ಕಾರಣ......
ಈ ತರ್ಕದ ಆಲೋಚನೆಯ ನಂತರ ನಾ ಒಂದು ಅಂಶವನ್ನು ಗಟ್ಟಿಯಾಗಿ
ಹೇಳಲು ಬಯಸಿದೆ.... ಅದೇನೆಂದರೆ
"ವೃಕ್ಷ ಮೊದಲಾ ಬೀಜ ಮೊದಲಾ" ಎಂಬ ಪ್ರಶ್ನೆಗೆ ಬೀಜವೇ ಮೊದಲು ಎಂಬುದು...........

nice satish sir ..... yake e blog na hide madidira? plz share with fb...
ReplyDelete