ಅವರವರ ಭಾವಕ್ಕೆ ತಕ್ಕಂತೆ…….. ದೂರದ ಬೆಟ್ಟ ನುಣ್ಣಗೆ !
ಪ್ರೇಮಿಗಳಿಬ್ಬರ ನಡುವಿನ ಮಾತು ಕಥೆ :- ಓ ಕಾಶ್ಮೀರ ನೀನೆಷ್ಟು ಸುಂದರ! ಅದ್ಭುತ ರಮಣೀಯ…. ನೀ ನಿಸರ್ಗದ ಸ್ವರ್ಗ, ನಿನ್ನ ಮಡಿಲಲ್ಲಿ ನಾವಿಬ್ಬರು ಬಾಹುಬಂಧನದಲ್ಲಿ ಒಂದಾಗಿರುವಾಗ ನಿನಗಿಂತ ಬೇರೆ ಸ್ವರ್ಗ ಇನ್ನೊಂದಿಲ್ಲ, ನಮ್ಮಂತಹ ಸಹಸ್ರ ಸಹಸ್ರ ಪ್ರೇಮಿಗಳಿಗೆ ನೀನು ಸುಖ ನಿದ್ರೆಯ ನೀಡಿರುವೆ ಆ ತೃಪ್ತಿ ಅವಿಸ್ಮರಣೀಯ! ನಿನ್ನ ಪ್ರೀತಿಗೆ ನಾವು ಚಿರ ಋಣಿ ಜೈ ಹಿಂದ್ ಜೈ ಭಾರತ ಮುಕುಟವೇ….
ಅತ್ತ ಯೋಧರಿಬ್ಬರ ಮಾತುಕತೆ :- ಓಹ್ ಕಾಶ್ಮೀರಾ ನೀನೆಷ್ಟು ಘೋರ? ರೌದ್ರ ರಮಣೀಯ… ನೀ ನಿಸರ್ಗದ ನರಕ , ನಿನ್ನ ಗಡಿಯಲ್ಲಿ ನಾವು ನಿಂತಿರುವಾಗ ನರಕದ ಇನ್ನೊಂದು ಮುಖದ ದರ್ಶನ ನಮಗಾದಂತೆ. ನಮಗೆ ನಿನಗಿಂತ ನರಕ ಸದೃಶ ಜಗತ್ತು ಇನ್ನೊಂದಿಲ್ಲ ಎಂದೆನಿಸುತ್ತಿದೆ, ನಿನ್ನ ಉಳಿವಿಗಾಗಿ ಸಹಸ್ರ ಸಹಸ್ರ ಜನರು ನಿನ್ನ ಮಡಿಲಲ್ಲಿ ಚಿರ ನಿದ್ರೆಗೆ ಜಾರಿಹರು ನಿನ್ನ ಪಾದಕೆ ನಮ್ಮ ಪ್ರಾಣ ಪಣವಾಗಿದೆ ಜೈ ಹಿಂದ್ ಜೈ ಭಾರತ ಮುಕುಟವೇ…
ಈ ಕಾಲ್ಪನಿಕ ಮಾತು “ಕಥೆ”ಗಳ ಹಿಂದಿರುವ ಕಾಶ್ಮೀರದ 'ಎರಡು ಮುಖದ ಭಾವಗಳನ್ನು’ ಅಂತರಂಗಕ್ಕೆ ತೋಚಿದ ಹಾಗೆ ಅಕ್ಷರ ಪದಪುಂಜಗಳಲ್ಲಿ ಹಿಡಿದಿಡುವ ಒಂದು ಪ್ರಯತ್ನ ಈ “ಅಂತರಂಗದಿಂದ”……
>>>>>>>>>>>>>>>>>>>>>>>>>>>>>>>>>>>>>>>>>>>>>>>
ಸುಂದರ ಭಾವದ ಕಾಶ್ಮೀರ......
ದೂರದಿಂದ ನೋಡುವವರಿಗೆ ಇದು ಮಂಜಿನಿಂದ ಸ್ವರ್ಗ ಧರೆಗಿಳಿದಂತೆ
ಕಾಣುವ ಲೋಕದ ಜಾಗ….. ಪ್ರೇಮಿಗಳ ಪಾಲಿನ ಪ್ರೇಮಲೋಕ………. ನವ ವಧು ವರರ ಪಾಲಿಗೆ ಸ್ವರ್ಗಲೋಕ……….
ನಲ್ಲ ನಲ್ಲೆಯರು ಜೊತೆ ಜೊತೆಗೆ ನಡೆವ, ಬಿಸಿಯಪ್ಪುಗೆಗೆ ಹಾತೊರೆಯುವ ಸ್ಥಳ….. ರಕ್ತದ ಕಣ ಕಣದಲ್ಲೂ ಬಿಸಿಯೇರಿಸುವ ಜಾಗ… ಬಿಸಿಯುಸಿರ ಮಿಲನಕ್ಕೆ ರೋಮಾಂಚಿತವಾಗುವ ಸ್ಥಳ….. ಮೋಡಗಳ ಮುಟ್ಟುವಷ್ಟು ಎತ್ತರಕ್ಕೆ ಏರಿ ಜಗತ್ತನ್ನೇ ಗೆದ್ದೇ ಬಿಟ್ಟಷ್ಟು ಸಂತಸ ಪಡುವ ಪ್ರದೇಶ……….

ಜೀವಕ್ಕೆ
ಜೀವವೆನಿಸುವ ಪ್ರೇಮಿಗಳಿಗೆ ಸ್ವರ್ಗ ಸೌಂದರ್ಯ ಸೋಪಾನ………. ಬಿರಿದ ಮೊಗ್ಗಿನ
ಮೇಲೆ, ಅರಳಿದ ಹೂಗಳ ಮೇಲೆ ಮಂಜಿನ ಬಿಂದುಗಳ ಕಂಡಾಗ ಹೃದಯಾಂತರಾಳದಿ ನದಿ ಹರಿದಷ್ಟು
ರೋಮಾಂಚನ....
ಕಣ್ಣು ಹಾಯಿಸಿದಷ್ಟೂ ಎತ್ತರಕೆ ಕಾಣುವ ಆಗಸವ ನೋಡಿ ಗಂಟಲು ಹರಿಯುವಷ್ಟು ಕಿರುಚಿ ಖುಷಿ ಪಡುವ ಸಮಯ ಆನಂದಮಯ…….
ದೂರದಲ್ಲಿರುವ ಬಂಧು ಬಾಂಧವರು/ ಸ್ನೇಹಿತರು ಇಲ್ಲಿಗೆ ಹೋದವರನು ನೆನೆದು ಸಂತಸ ಪಡುವ ಕಾರಣವಾಗುವ ಸ್ಥಳ,
ಕಣ್ಣು ಹಾಯಿಸಿದಷ್ಟೂ ಎತ್ತರಕೆ ಕಾಣುವ ಆಗಸವ ನೋಡಿ ಗಂಟಲು ಹರಿಯುವಷ್ಟು ಕಿರುಚಿ ಖುಷಿ ಪಡುವ ಸಮಯ ಆನಂದಮಯ…….
ದೂರದಲ್ಲಿರುವ ಬಂಧು ಬಾಂಧವರು/ ಸ್ನೇಹಿತರು ಇಲ್ಲಿಗೆ ಹೋದವರನು ನೆನೆದು ಸಂತಸ ಪಡುವ ಕಾರಣವಾಗುವ ಸ್ಥಳ,
ಬಾಳ ಪಯಣದ ಸಂಗಾತಿಯ
ಜೊತೆಗೂಡಿ ಹೆಜ್ಜೆ ಇಡುವಾಗ
ಇನ್ನಾವ ಗೊಡವೆಯ ಚಿಂತೆ
ನಮಗೇಕೆ ಎನ್ನುವ ಭಾವ
ಇಲ್ಲಿರುವ ಪ್ರತೀ
ಗಂಟೆಯೂ
ಒಂದೊಂದು ಕ್ಷಣದಂತೆ ಕಳೆದ ಭಾವ, ನಿಲ್ಲು
ಕಾಲವೇ ನಿಲ್ಲು ನನ್ನ ನಲ್ಲೆ ಜೊತೆಗಿರುವಾಗ ಓಡಬೇಡ ತೆವಳುತ್ತಾ ಸಾಗು ಎನ್ನುವಂತೆ ಕೇಳಿಕೊಳ್ಳುವ ಮಧುರ ಚಿಂತನೆ…….
ಪ್ರೀತಿ ಧ್ಯೋತಕದ ಪ್ರತೀಕವಾದ ಪ್ರಕೃತಿಯ ಮಡಿಲಲ್ಲಿ ಜಗದ ಎಲ್ಲ ಭಾವಗಳನ್ನು ಮರೆತು ತಂಪು ತಂಪಾಗಿ ಹರಿವ ಝರಿಯಲಿ ಬೀಳುವ ನೀರನು ಕಂಡಾಗಾ ರೋಮಾಂಚನ
ಪ್ರೀತಿ ಧ್ಯೋತಕದ ಪ್ರತೀಕವಾದ ಪ್ರಕೃತಿಯ ಮಡಿಲಲ್ಲಿ ಜಗದ ಎಲ್ಲ ಭಾವಗಳನ್ನು ಮರೆತು ತಂಪು ತಂಪಾಗಿ ಹರಿವ ಝರಿಯಲಿ ಬೀಳುವ ನೀರನು ಕಂಡಾಗಾ ರೋಮಾಂಚನ
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>
ಯಾತನಾ ಭಾವದ ಕಾಶ್ಮೀರ......
ಆದರೆ ಹತ್ತಿರದಿಂದ
ನೋಡಿದಾಗ ಮಾತ್ರ ತಿಳಿಯುವುದು ಅದು ತಣ್ಣಗೆ ಕಾಣುವ ಜ್ವಾಲಾಮುಖಿ ಎಂದು…… ಮದ್ದು ಗುಂಡು ಬಂದೂಕು, ಸ್ಪೋಟಕಗಳಿಂದ ಹನಿಗಳಿಂದ ಕೂಡಿದ ನರಕ ಲೋಕ
ಎಂದು ….. ಬಾಳ ಪಯಣದ ಜೊತೆಗಾರನ ಸಂಗಾತಿಯಿಂದ ದೂರ ಮಾಡುವ ಸ್ಥಳ…….
ದೂರದಲ್ಲಿರುವ ಬಂಧು ಬಾಂಧವರು/ ಸ್ನೇಹಿತರು ಇಲ್ಲಿಹರನು ನೆನೆದು ನಿಟ್ಟುಸಿರ ಬಿಡುವಿಕೆಗೆ ಕಾರಣವಾಗುವ ಸ್ಥಳ…… ರಕ್ತದ ಕಣ ಕಣವನ್ನೂ ಹೆಪ್ಪುಗಟ್ಟಿಸುವ ಜಾಗ……. ನಮ್ಮ ದೇಶದ ಇಂಚಿಂಚನ್ನೂ ಬಿಟ್ಟುಕೊಡಲಾಗದೆ ಕಾದು ಕುಳಿತ ಪ್ರದೇಶ…….
ದೂರದಲ್ಲಿರುವ ಬಂಧು ಬಾಂಧವರು/ ಸ್ನೇಹಿತರು ಇಲ್ಲಿಹರನು ನೆನೆದು ನಿಟ್ಟುಸಿರ ಬಿಡುವಿಕೆಗೆ ಕಾರಣವಾಗುವ ಸ್ಥಳ…… ರಕ್ತದ ಕಣ ಕಣವನ್ನೂ ಹೆಪ್ಪುಗಟ್ಟಿಸುವ ಜಾಗ……. ನಮ್ಮ ದೇಶದ ಇಂಚಿಂಚನ್ನೂ ಬಿಟ್ಟುಕೊಡಲಾಗದೆ ಕಾದು ಕುಳಿತ ಪ್ರದೇಶ…….
ಜೀವದ ಹಂಗನ್ನು ತೊರೆದು ಜೀವಕ್ಕಿಂತ ಹೆಚ್ಚಾದ
ದೇಶ ರಕ್ಷಣೆಯೇ ಯೋಧರ ಜೀವನ….. ಚಿಗುರಲ್ಲೇ ಉದುರಿಬಿದ್ದ ಮೊಗ್ಗಿನ ಮೇಲೆ, ಬಂದೂಕಿನ ನಳಿಕೆಯ ಬಿಸಿಗೆ ಬಾಡಿದ ಹೂವುಗಳ ಮೇಲಿನ ರಕ್ತದ ಕಲೆ ಕಂಡಾಗ ಹೃದಯ ಹಿಂಡಿದ ಯಾತನೆ…….
ಮನದ ನೋವ ಯಾರಲ್ಲೂ ಹೇಳಲಾಗದೆ ಎತ್ತರದ ಆಗಸವ
ನೋಡಿ ಶಬ್ಧವ ಹೊರಡಿಸಲಾಗದೆ ಮನದಲ್ಲೇ ಕೊರಗುವ ಸಮಯ ಯಾತನಾಮಯ……….
ಬಾಳ ಪಯಣದ ಹಾದಿಯಲಿ ಜೊತೆಗೂಡಿದ ಸಂಗಾತಿಯ ಬಿಟ್ಟು ಬಂದು ದೇಶ ಸೇವೆಯೇ ಮೇಲು ಎಂದು ಗಡಿ ಕಾದು ಕುಳಿತ
ದೇಶದ ಗೊಡವೆಯು ನಮ್ಮದು ಎನ್ನುವ
ಭಾವ.....
ಇಲ್ಲಿ ಕಳೆವ ಪ್ರತೀ ಗಂಟೆಯೂ
ಒಂದೊಂದು ದಿನ
ಕಳೆದಂತೆ ಕಳೆಯಲಾಗದ ಭಾವ ….. ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು ….
ಓಡು ಕಾಲವೇ ಓಡು
ನನ್ನ ನಲ್ಲೆಯ ಸೇರುವ ಸಮಯದವರೆಗೆ ಎನ್ನುವ ಯಾತನೆ…..
ಇಲ್ಲಿ ಸಿಡಿದ
ಮದ್ದುಗಳ ನಡುವೆ ಸಿಲುಕಿ ಸಿಡಿದ ದೇಹದಿಂದ ಸುರಿದ
ನೆತ್ತರ ಕೋಡಿಯ
ಹರಿವು ಬದುಕಿರುವ ನಮ್ಮ ನೆತ್ತರನ್ನೂ ಹೆಪ್ಪುಗಟ್ಟಿಸುವಂತಿದೆ…
………………………………..... <><><><><><>…………………………………
………………………………..... <><><><><><>…………………………………
ಒಂದು ಭೂಮಿಯ ಗಡಿ
ಭಾಗದ ಉಳಿವಿಕೆಗಾಗಿ
ಎರಡು ದೇಶಗಳ ನಡುವೆ
ನಡೆವ ಘೋರ ಯುದ್ಧದಿ
ಮಡಿದವರ ಸಂಖ್ಯೆ ಸಹಸ್ರ ಸಹಸ್ರ…….
ಅದೇ ಗಡಿಯಲಿ
ಬೆಳೆದ ಹೂವ ನಲ್ಲೆಯ
ಮುಡಿಗೇರಿಸಿ ನಲಿದವರೂ
ಸಹ ಸಹಸ್ರ ಸಹಸ್ರ ….
ಭಾಗದ ಉಳಿವಿಕೆಗಾಗಿ
ಎರಡು ದೇಶಗಳ ನಡುವೆ
ನಡೆವ ಘೋರ ಯುದ್ಧದಿ
ಮಡಿದವರ ಸಂಖ್ಯೆ ಸಹಸ್ರ ಸಹಸ್ರ…….
ಅದೇ ಗಡಿಯಲಿ
ಬೆಳೆದ ಹೂವ ನಲ್ಲೆಯ
ಮುಡಿಗೇರಿಸಿ ನಲಿದವರೂ
ಸಹ ಸಹಸ್ರ ಸಹಸ್ರ ….
ಕೊನೆಗೆ ಅನಿಸಿದ್ದು "ಕಾಶ್ಮೀರ ಪ್ರೇಮಿಗಳ ಪಾಲಿನದು ಮಾತ್ರ ಆಗುವುದು ಸಾಧ್ಯವಿಲ್ಲವೇ?"
ಈ ಹೋರಾಟಕ್ಕೆ ಕೊನೆಯಿಲ್ಲವೇ?????

ಎರಡು ಕವನಗಳ ಮೂಲಕ, ಎರಡು ಕೋನಗಳಲ್ಲಿ ಕಾಶ್ಮೀರದ ಯಥಾ ಸ್ಥಿತಿಯನ್ನು ತೆರೆದಿಟ್ಟ ಪ್ರಸ್ತುತಿ ಇದು.
ReplyDeleteಉಪ ಸಂಹಾರದ ಆಶಯ ಮನ ಸೆಳೆಯಿತು.
ಸರ್ ನಿಮ್ಮ ಪ್ರೋತ್ಸಾಹಕ್ಕೆ ನಾ ಚಿರರುಣಿ.... ನಿಮ್ಮ ಆಶೀರ್ವಾದ ಸದಾಕಾಲ ಹೀಗೆ ಇರಲಿ ಎಂದು ಆಶಿಸುವೆ...
Delete