ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

Saturday 1 March 2014

ಜನುಮ ದಿನದ ಹಾರ್ದಿಕ ಶುಭಾಶಯಗಳು ಶ್ರೀಕಾಂತಣ್ಣ..........

ಒಂದು ದಿನ ದೇವಲೋಕದ ದೇವಾನು ದೇವತೆಗಳೆಲ್ಲಾ ಸಭೆ ಸೇರಿದ್ದರು...... ಚರ್ಚೆ ನಡೆಯುತ್ತಿತ್ತು..... ಚರ್ಚೆಯ ವಿವರ ಹೀಗಿತ್ತು...

ನಾವು ದೇವರುಗಳು ಅಂದರೆ ಭೂಲೋಕವನ್ನು ಸೃಷ್ಟಿಸಿದ್ದು ನಾವು, ಭೂಮಿಯನ್ನು ಬುಗುರಿಯಂತೆ ತಿರುಗಿಸುತ್ತಿರುವವರು..... 

ಭೂಮಿಯಲ್ಲಿನ ಪ್ರತಿಯೊಬ್ಬರ ಆಗು ಹೋಗುಗಳನ್ನು ಕಷ್ಟ ಸುಖಗಳನ್ನು, ನಗು ಅಳುಗಳನ್ನು ನಾವಿಲ್ಲಿ ಕಣ್ಣು ಹಾಯಿಸಿಯೇ ತಿಳಿದು ಕೊಳ್ಳುವಂತಹ ದಿವ್ಯ ಶಕ್ತಿ ಉಳ್ಳವರು.... ಅವುಗಳನ್ನು ಮೊದಲೆ ಗ್ರಹಿಸುವವರೂ ಕೂಡಾ ನಾವೇ ! ಎಲ್ಲಕ್ಕಿಂತ ಮಿಗಿಲಾಗಿ ಅದನ್ನು ನಿರ್ಧರಿಸುವವರೂ ನಾವೇ....! ನಾವೇ ಸರ್ವಶಕ್ತರು.... 

ಅಷ್ಟರಲ್ಲಿ ಲೋಕ ಸಂಚಾರಿ ನಾರದರು ಬಂದರು ಇವರ ಚರ್ಚೆಯ ಮಧ್ಯೆ ಮೂಗು ತೂರಿಸಿ ನಿಮ್ಮಂತೆಯೇ ಭೂಲೋಕದಲ್ಲೂ ಒಬ್ಬರು ನಮ್ಮ ದೇವಲೋಕದ ಆಗು ಹೋಗುಗಳ ಬಗ್ಗೆ ತಿಳಿದಿಕೊಂಡಿರುವವರು ಇದ್ದಾರೆ ಎಂದರು!

ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು

ಅದಾರು ಅವನಾರು ನಾವಿಲ್ಲಿ ನಡೆಸುವ ಮಾತು ಕಥೆಗಳನ್ನು, ಚರ್ಚೆ, ಏಕಾಂತ ಸಂಭಾಷಣೆಗಳನ್ನು ಕುಳಿತಲ್ಲೇ ಕಲ್ಪನೆ ಮಾಡಿ ಬರೆವವವರು?

ನಾರದರು ಮುಂದುವರೆಸಿದರು ಬರೆಯುವುದು ಅಷ್ಟೆ ಅಲ್ಲಾ, ಕೆಲವು ದೇವರುಗಳಿಗೆ ಭೂಲೋಕದ ವಿದ್ಯಾರ್ಥಿ ಭವನದ ಮಸಾಲೆ ದೋಸೆಯ ರುಚಿಯನ್ನೂ ಹತ್ತಿಸಿ ಬಿಟ್ಟಿದ್ದಾರೆ........ ದೇವಾನು ದೇವತೆಗಳೆಲ್ಲಾ ಮುಖ ಮುಖ ನೋಡಿಕೊಂಡರು!

ಹೌದು ಅಂತಹ ಒಬ್ಬರು ವ್ಯಕ್ತಿ ಇದ್ದಾರೆ ನಿಮಗೆ ಅವರನ್ನು ನೋಡುವ ಕುತೂಹಲವೇ? ಇಲ್ಲಿ ಬನ್ನಿ ಎಲ್ಲರೂ ಸುತ್ತಲೂ ನಿಲ್ಲಿ ಆಗೋ ಅಲ್ಲಿ ನೋಡಿ ಭೂ ಭಾಗದಲ್ಲಿ ಭಾರತ, ಅದರೊಳಗೆ ಕರುನಾಡು, ಅದರೊಳು ಬೆಂದಕಾಳೂರು,  ಬೆಂದಕಾಳೂರಿನ ಹೃದಯ ಭಾಗದಲ್ಲಿ ಕೈಯಲ್ಲಿ ಒಂದು ಕ್ಯಾಮರ ಹಿಡಿದು ಹಸನ್ಮುಖಿಯಾಗಿ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದರಲ್ಲಾ ಅವರೇ!!

ಎಲ್ಲಾ ದೇವತೆಗಳೂ ಒಕ್ಕೂರಲಿನಿಂದ ಇವರು ನಮ್ಮ ಶ್ರೀಕಾಂತು (Srikanth Manjunath) ಎಂದು ಉದ್ಘರಿಸಿದರು!

ನಾರದರು ಮುಂದುವರೆದು ಹೌದು ಇವರು ನಿಮ್ಮ ಪ್ರೀತಿಯ ಶ್ರೀಕಾಂತೂ ನಿಜ, ಜೊತೆಗೆ ಸರಸ್ವತಿಯ ಪ್ರೀತಿಯ ದತ್ತುಪುತ್ರ ಹಾಗಾಗಿ ಅಭಿಮಾನದಿಂದ ಕೆಲವು ದೇವತೆಗಳು ಆಗಾಗ ಅವರ ಬ್ಲಾಗಿನ ಒಳಗೆ ಹೋಗಿ ಪಾತ್ರವಾಗಿ ಇರುತ್ತಾರೆ ಎಂದರು

ಇಂದು ಅವರ ಜನುಮ ದಿನ ಹೇಗೂ ಎಲ್ಲಾ ದೇವತೆಗಳೂ ಸೇರಿದ್ದೀರಿ ಹರಸಿ ಹಾರೈಸಿ ಎಂದಾಗ ಎಲ್ಲಾ ದೇವತೆಗಳೂ "ಶತಮಾನಂ ಭವತಿ ಶತಾಯುಹ್"   ಎಂದು ಹಾರೈಸಿದರು ಎಂಬಲ್ಲಿಗೆ ಈ ಬರಹಕ್ಕೆ ಮಂಗಳ ಹಾಡಲಾಯಿತು.

>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>

ಜನುಮ ದಿನದ ಹಾರ್ದಿಕ ಶುಭಾಶಯಗಳು ಶ್ರೀಕಾಂತಣ್ಣ

7 comments:

  1. ತೀಶ್ ಬಹಳ ಒಳ್ಳೆಯ ಪೋಸ್ಟ್ ಹಾಕಿದ್ದೀರಿ, ಪ್ರೀತಿಯ ಆಯಸ್ಕಾಂತ ಈ ಗೆಳೆಯ , ನಿಮ್ಮ ಲೇಖನ ಬಹಳ ಚೆನ್ನಾಗಿದೆ, ಇಷ್ಟಾ ಆಯ್ತು, ನಿಮ್ಮ ಮಾತಿನಂತೆ ದೇವಲೋಕದಲ್ಲಿ ಇವತ್ತು ಇದೆ ಚರ್ಚೆ ಇರಬಹುದೇನೋಪ್ಪ . ಗೆಳೆಯನಿಗೆ ಶುಭಾಶಯಗಳು ಹಾಗು ನಿಮಗೆ ಧನ್ಯವಾದಗಳು

    ReplyDelete
    Replies
    1. ಧನ್ಯವಾದಗಳು ಬಾಲಣ್ಣ....

      Delete
  2. ಸತೀಶ್ ಒಳ್ಳೆಯ ಲೇಖನ, ಸದಾ ಎಲ್ಲರ ಬಗ್ಗೆ ಬರೆಯುವ ಶ್ರೀಕಾಂತ್ ಹುಟ್ಟುಹಬ್ಬಕ್ಕೆ ಒಳ್ಳೆ ಉಡುಗೊರೆ ಕೊಟ್ಟಿದ್ದೀರಿ. ಶುಭವಾಗಲಿ. ಶ್ರೀಕಾಂತ್ ಸದಾ ನಿಮಗೆ ಒಳಿತಾಗಲಿ ಎಂದು ಆಶಿಸುತ್ತೇನೆ. ಹುಟ್ಟು ಹಬ್ಬದ ಶುಭಾಶಯಗಳು

    ReplyDelete
    Replies
    1. ಧನ್ಯವಾದಗಳು ಸುಗುಣಾ ಮೇಡಂ

      Delete
  3. ದೇವರುಗಳು ಕೂಡಾ ಅಚ್ಚರಿಪಡುವಂತೆ ಸನ್ನಿವೇಶಗಳನ್ನು ಹೆಣೆಯುವವರು ನಮ್ಮ ಶ್ರೀ ಕಾಂತ್ ಸಾರ್.. ಅವರ ಶೈಲಿಯಲ್ಲೇ ನೀವು ಅವರಿಗೆ ಶುಭಾಶಯ ಕೋರಿರುವುದು ಬಹಳ ಸ್ವಾರಸ್ಯ ಮೂಡಿಸಿದೆ. ಒಳ್ಳೆ ಬರಹ. ನನ್ನ ಕಡೆಯಿಂದಲೂ ಅವರಿಗೆ ಶುಭಾಶಯಗಳು!

    ReplyDelete
    Replies
    1. ಧನ್ಯವಾದಗಳು ಪ್ರದೀಪ್ ಭಾಯ್

      Delete
  4. ದೇವರುಗಳು ಮೆಚ್ಚಿದ್ದಾರೆ ಹಾಗೆ ಅಭಿಮಾನಿ ದೇವರುಗಳು ಮೆಚ್ಚಿದ್ದಾರೆ !! DOM sbk .. ಜನುಮ ಶುಭಾಶಯಗಳು ಶ್ರೀಕಾಂತ್ ಸರ್ God Bless ...

    ReplyDelete