ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

Sunday 1 June 2014

ಕಾಲ ಚಕ್ರದ ಜಾಲದಲ್ಲಿ.....

ನಾನು ನನ್ನ ಶತ್ರುವನ್ನೂ ನೋಯಿಸಲು ಇಷ್ಟಪಡುವುದಿಲ್ಲ ಎಂದವನೊಬ್ಬ ಹಿಂದೊಮ್ಮೆ ಬದುಕಿಗೆ ಬೆಳಕಾದ ಸ್ನೇಹಿತನನ್ನೇ  ವ್ಯಂಗ್ಯ ಮಾತಿನ ಮೂಲಕ ಚುಚ್ಚಿ ಹಿಂಸಿಸತೊಡಗಿದ....... ಇದೇ ಇರಬೇಕು ಕಾಲಚಕ್ರದ ಮಹಿಮೆ.......

ಕಷ್ಟದಲ್ಲಿ ಕಣ್ಣೀರಿಡುತ್ತಿದ್ದಾಗ ಕಣ್ಣೀರ ಒರೆಸಿ..... ನಿನ್ನ ಭಾರಗಳಿಗೆ ಹೆಗಲು ನೀಡಿ ಪಾಲು ಪಡೆದು ನೋವ ನಿವಾರಿಸಿದ... ನಿನ್ನ ಬದುಕಿಗೆ ನೆರಳಾಗಿ ನಿಂತದ್ದಕ್ಕೆ ನೀ ಕೊಟ್ಟ ಉಡುಗೊರೆ ಕಣ್ಣೀರು.... ಯಾರದೋ ತಪ್ಪು ಶಿಕ್ಷೆ ಮಾತ್ರ ನಿರಪರಾಧಿಗೆ.....

ನನಗೆ ಗೊತ್ತು ಸರಿ ತಪ್ಪುಗಳನ್ನು ಪರಾಮರ್ಶಿಸುವ ಮನಸ್ಥಿತಿ ನಿನ್ನಲ್ಲಿ ಇಲ್ಲ ಎಂದು..... ನಾನು ಮಾಡಿದ್ದೇ ಸರಿ ಎಂದು ವಾದಿಸುವ ಅಹಂ ಕೂಡಾ ಹೆಚ್ಚಾಗಿದೆ ಎಂಬುದು, ನಿನ್ನಲ್ಲಿನ ಮಾನವೀಯತೆಯ ಗುಣಗಳು ಬರೀ ತೋರ್ಪಡಿಕೆ ಮಾತ್ರ ಸೀಮಿತವೆಂಬುದು ಈಗ ನನಗೆ ಮನದಟ್ಟಾಗಿದೆ....
ಒಂದು ಮಾತು ನೆನಪಿಟ್ಟುಕೋ ಗೆಳಯ ಬಣ್ಣದ ಮಾತುಗಳಿಗೆ ಮನ್ನಣೆ ಎಂಬುದು ನಿನ್ನ ಪಾಲಿಗೆ ಸಿಹಿ ಆಗಿರಬಹುದು ಆದರೆ ಮುಂದೊಮ್ಮೆ ನಿನಗೇ ಅರ್ಥವಾಗುತ್ತದೆ ಗಾಜಿನ ರಾಮನೆಯಲ್ಲಿ ಕುಳಿತು ಎದುರು ಮನೆಯ ಕಿಟಕಿಗೆ ಕಲ್ಲು ಬೀಸುವ ಮುನ್ನ ಯೋಚಿಸು......
ಅಂತಿಮವಾಗಿ ಒಂದು ಮಾತು... ನಿನ್ನ ಸ್ವಾರ್ಥಕ್ಕಾಗಿ ನೀ ಯಾವ ಕ್ಷಣದಲ್ಲಾದರೂ ಬದಲಾಗಿಬಿಡುವೆ ಎಂಬ ಸತ್ಯವನ್ನು ಮನದಟ್ಟು ಮಾಡಿದ್ದಕ್ಕೆ ಧನ್ಯವಾದಗಳು...... 

2 comments:

  1. ಗೆಳೆತನಗಳ ಬುನಾದಿಯೇ ಅಲುಗಿ ಹೋಗುವಂತೆ, ಮಿತ್ರನೊಬ್ಬ ನಡೆದುಕೊಂಡಂತಿದೆ.
    ಅಹಂ ಅಥವ ಹೇಳಿಕೆ ಮಾತನಿಂದಲೋ ಅವರ ಮನಸ್ಸಿಗೆ ಪೊರೆ ಕವಿದಂತಿದೆ, ತಾವು ನೊಂದುಕೊಳ್ಳಬೇಡಿರಿ.
    ಯಾವತ್ತಿಗೂ ಸತ್ಯಕ್ಕೇ ಜಯ...

    https://www.facebook.com/photo.php?fbid=602047969839656&set=gm.483794418371780&type=1&theater

    ReplyDelete
  2. " ಏಣಿ ಹತ್ತಿದ ಮೇಲೆ .ಕಾಲಿನಿಂದ ಒದೆಯುವವರೇ ಹೆಚ್ಚು.." ಕೆಲವು ಸ್ನೇಹಿತರಲ್ಲೂ ಈ ಗುಣವನ್ನು ಕಾಣುತ್ತೇವೆ. ನಡೆದು ಬಂದ ದಾರಿಯನ್ನು ನೆನಪಿಸಿಕೊಳ್ಳದವರು ಮುಂದೆ ಪಶ್ಚಾತ್ತಾಪ ಪಡುವಾಗ ಯಾರೂ ಅವರೊಂದಿಗೆ ಇರಲಾರರು, ಆಗ ಮತ್ತೆ ಸ್ನೇಹಿತರೇ ಅತ್ಯವಶ್ಯವಾಗುತ್ತಾರೆ. ಸಹನೆಯಿಂದಿದ್ದರೆ ಕಾಲ ಎಲ್ಲವನ್ನೂ ಮನದಟ್ಟುಮಾಡಿಸುತ್ತದೆ.

    ReplyDelete