ನಾನು ನಾನೆನ್ನುವ ನಾನು.... ನಾನಾರು ಎಂಬುದ ತಿಳಿಯಲು ಈ ಹಾಡು ಕೇಳೋಣ
ನಾ ನಾ ಎಂಬುದು ನಾನಲ್ಲ
ನಾ ನಾ ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ
ನಾರಾಯಣ ಪರಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನಾ ನಾ ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನರದೇಹವಿದು ನಾನಲ್ಲ
ಜರ ಮರಣಾದಿಯು ನಾನಲ್ಲ ... ೨
ವರ ವೈಭವ ಸಂಸಾರದ
ಸವಿ ಸುಖ ಮರನಾಯಕ ನಾನಲ್ಲ
ಮಾತ ಪಿತ ಸುತ ನಾನಲ್ಲ
ಗುರುನಾಥನಾದವ ನಾನಲ್ಲ ... ೨
ಜಾತಿ ಗೋತ್ರಗಳು ನಾನಲ್ಲ
ಬಹು ಪ್ರೀತಿಯ ಸತಿ ಸುತ ನಾನಲ್ಲ
ನಾ ನಾ ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾನಾ ರೂಪವು ನಾನಲ್ಲ
ನಾ ಶಿಷುನಾಳಧೀಶನ ಬಿಡಲಿಲ್ಲ ... ೨
ನಾ ಅಳಿಯದೆ ನಾ ತಿಳಿಯಲಾರದು
ನಾ ಅಳಿಯದೆ ನಾ ತಿಳಿಯಲಾರದು
ನೀ ಎಣಿಸುವ ಗುಣ ನಾನಲ್ಲ
ನಾ ನಾ ಎಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರಬ್ರಹ್ಮ ಸದಾಶಿವ
ನಾರಾಯಣ ಪರಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ.............
ಮಾರ್ಮಿಕವಾದ ಶಿಶುನಾಳ ಷರೀಫ ಸಾಹೇಬರ ತತ್ವಪದವಿದು.
ReplyDeleteಬಹುಶಃ ಧಾರವಾಡದ ಸುನಾಥ್ ಸಾರ್ ಅವರ ಬ್ಲಾಗಿನಲ್ಲಿ ಇದರ ವಿಶ್ಲೇಷಣೆ ಸಿಗಬಹುದು. ಹುಡುಕುವೆ ಇರಿ.
Niravana shataka of adi shankarachrya
Delete